TOON

TOON
WE ARE TOONS

Saturday, June 18, 2016

ನಾನು ನೀನು ಅಥವಾ ಮಾಯಾ ಅಥವ ದ್ವೈತ

ನಾನು ನೀನು ಅಥವಾ ಮಾಯಾ ಅಥವ ದ್ವೈತ
ನೀನು ನನ್ನೊಡನೆ ಇರುವೆ ಎಂದು ನಂಬಿಕೆ ಮೂಡುವಾಗ
ನನ್ನ  ನೋಡದೆ ಗಮನಿಸದೆ ಕಡೆಗಾನಿಸುವೆ
ಮತ್ತೆ ನನ್ನನ್ನು ಸೊನ್ನೆಯ ಸ್ಥಾನಕ್ಕೆ ಹಾಕಿ ನಡೆಯಲು ಶುರುಮಾಡು ಎನ್ನುವೆ
ಮಕ್ಕಳು ಬರೆದ ಸ್ಲೇಟನ್ನು ಹಿರಿಯರು ಅಳಸಿ ಮತ್ತೆ ಬರೆ ಎನ್ನುವಂತೆ
ನನಗೂ ಗೊತ್ತು ಇದರಿಂದ ನೀನು ನನ್ನ ಕರ್ಮಗಳ ಕೊಳೆ ಅಳಿಸುತ್ತಿರುವೆ ಎಂದು
ಆದರೂ ಆಗಾಗ ಅಳಕು ನೀನು ನನ್ನನ್ನು ಬಲ್ಲೆಯ ಎಂದು
ಈ ಪ್ರಶ್ನೆ ಮನದಲ್ಲಿ ಮೂಡಿದಾಗ ನನ್ನ  ಹೆಸರ ಹಿಡಿದು ಕರೆಯುವೆ
ಯಾವುದೊ ಸಂದರ್ಭದಲ್ಲಿ ನಾನಿಲ್ಲದಾಗ ಸೆಕ್ರೆಟರಿ ಇಂದ ಕಾಲು ಗುರುಗಳು ನಿನಗೆ ಅಲ್ಲಿ ಹೋಗು ಅದು ಮಾಡು ಎಂದರು ಎಂದು
ಹೌದಾ? ನನಗೇ ಹೇಳಿದರ ? ಇಲ್ಲ ಇನ್ನೊಬ್ಬ  ರವಿ ಪ್ರಕಾಶ ನಿರಬೊಹುದು ನೋಡಿ ಎಂದರೆ
ಇಲ್ಲ ನೀವು ಮಮತ ರವಿ ಪ್ರಕಾಶ ರಲ್ಲವೇ ನೀವೇ ಎನ್ನುವ ಸ್ಪಷ್ಟೀಕರಣ ಮತ್ತೆ  ಮುಂದೆ ನಿಂತಾಗ ನಾನರೋ ನೀನಾರೋ ಎಂಬಂತೆ ಇರುವೆ
ಮತ್ತೆ  ಸಂಶಯ ಬಂದಾಗ ನಿನ್ನನ್ನು ನೀನು ಅರಿತರೆ ಎಲ್ಲವನ್ನು ಅರಿತಂತೆ ಎನ್ನುವೆ
ಏನಯ್ಯ ನಿನ್ನ ಮಾಯೆ ನಾವೆಲ್ಲ ಅದರಲ್ಲಿ ಗಂಜೀಫನ ಎಲೆಕಟ್ಟು
ನೀನು ಸಿದ್ಹ ನಾವು ಸಾಧಕರು
ಅದೇನು ಸಾಧಿಸುತ್ತಿದ್ದೆವೋ ನೀನೆ ಬಲ್ಲೆ ಓ ಗುರವೇ ಶ್ರೀ ಶ್ರಿ ರವಿಯ ಶರಣ